ಅಲೆಕ್ಸಾಂಡರ್, ಸರ್ ವಿಲಿಯಂ
(1567-1640). ಇಂಗ್ಲೆಂಡಿನ ರಾಜಕಾರಣಿ. ಕವಿ. ಕ್ಲಾಕ್‍ಮನ್‍ಷೈರ್‍ನ ಅಲ್ಪ ಎಂಬಲ್ಲಿ ಜನಿಸಿದ. ಗ್ಲ್ಯಾಸ್‍ಗೊ ಮತ್ತು ಲೀಡನ್‍ಗಳಲ್ಲಿ ಶಿಕ್ಷಣ ಪಡೆದು ಇಂಗ್ಲೆಂಡಿನ ಪ್ರಭು 6ನೆಯ ಜೇಮ್ಸ್‍ನೊಡನೆ ಇಂಗ್ಲೆಂಡಿಗೆ ಹೋಗಿ ಅಲ್ಲಿ ಆಸ್ಥಾನಾಧಿಕಾರಿಯಾದ. 1626ರಲ್ಲಿ ಸ್ಕಾಟ್‍ಲೆಂಡಿನ ವಿದೇಶಾಂಗ ಕಾರ್ಯದರ್ಶಿಯಾಗಿ ನೇಮಕಗೊಂಡು 1633ರಲ್ಲಿ ಅರ್ಲ್ ಗೌರವವನ್ನು ಪಡೆದ. ಇವನ ಕೃತಿಗಳಲ್ಲಿ ಅರೋರಾ (1604) ಮತ್ತು ರಿಕ್ರಿಯೇಷನ್ಸ್ ವಿತ್ ದಿ ಮ್ಯೂಸûಸ್ (1937) ಪ್ರಸಿದ್ಧಿ ಪಡೆದಿವೆ. ಈತ ಡೇರಿಯಸ್ (1603), ಕ್ರೋಸಸ್ (1904) ದಿ ಅಲೆಕ್ಸಾಂಡ್ರಿಯನ್ ಟ್ರ್ಯಾಜಿಡಿ (1605) ಮತ್ತು ಜೂಲಿಯಸ್ ಸೀಸûರ್ (1907) ಎಂಬ ನಾಲ್ಕು ರುದ್ರನಾಟಕಗಳನ್ನು ಬರೆದಿದ್ದಾನೆ.						

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ